ನಮಸ್ಕಾರ ಸ್ನೇಹಿತರೆ ಪ್ರಸ್ತುತ ಈ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ ! ಇವತ್ತಿನ ಈ ಒಂದು ಲೇಖನದ ಮೂಲಕ BPL ರೇಷನ್ ಕಾರ್ಡ್ ದಾರರಿಗೆ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ನಲ್ಲಿ ಆಗಿರುವ ತಪ್ಪುಗಳನ್ನು ತಿದ್ದುಪಡಿಗೊಳಿಸಲು ಅವಕಾಶವನ್ನು ನೀಡಿದೆ. ಇದರ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ. BPL Ration Card Update
ಇದನ್ನು ಓದಿ : UPI Payments New Rules : ಆಗಷ್ಟ್ 1 ರಿಂದ Phonepe, Google Pay ಬಳಕೆದಾರರಿಗೆ ಹೊಸ ರೂಲ್ಸ್ ಜಾರಿ ! ಕರ್ನಾಟಕ ಸರ್ಕಾರ ಆದೇಶ !
ಹೌದು ಸ್ನೇಹಿತರೆ ! ರಾಜ್ಯದಲ್ಲಿ ಈಗಾಗಲೇ ಹಲವಾರು ಕುಟುಂಬಗಳು BPL ರೇಷನ್ ಕಾರ್ಡನ್ನು ಹೊಂದಿದ್ದಾರೆ. ಹಾಗೂ ಇನ್ನು ಕೆಲ ಕುಟುಂಬಗಳು ಹಾಗೂ ನವ ವಿವಾಹಿತ ದಂಪತಿಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ. ಮತ್ತು ರೇಷನ್ ಕಾರ್ಡ್ ಹೊಂದಿರುವವರು ತಮ್ಮ ರೇಷನ್ ಕಾರ್ಡ್ ನಲ್ಲಿ ಆಗಿರುವ ಕೆಲವೊಂದು ತಪ್ಪುಗಳು ಹಾಗೂ ಕೆಲವೊಂದು ತಿದ್ದುಪಡಿಯನ್ನು ಮಾಡಿಕೊಳ್ಳಲು ಕಾಯುತ್ತಿದ್ದಾರೆ. ಅಂಥವರಿಗೆ ಇದೀಗ ರಾಜ್ಯ ಸರ್ಕಾರವು ಗುಡ್ ನ್ಯೂಸ್ ನೀಡಿದೆ.

ಅದೇನೆಂದರೆ ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ ಆಗಿರುವಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅಥವಾ ಮಕ್ಕಳ ಹೆಸರನ್ನು ಸೇರಿಸಿಕೊಳ್ಳಲು ಅಥವಾ ಇನ್ಯಾವುದೇ ರೀತಿ ತಿದ್ದುಪಡಿ ಇದ್ದರೆ ಸರಿಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಆಗಸ್ಟ್ 1 ರಿಂದ ಆಗಸ್ಟ್ 15ನೇ ತಾರೀಖಿನವರೆಗೆ ಅವಕಾಶವನ್ನು ನೀಡಿದೆ. ಇದರಿಂದಾಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾವುದೇ ತಪ್ಪಾಗಿದ್ದರೆ ಅಥವಾ ತಿದ್ದುಪಡೆ ಇದ್ದರೆ ನೀವು ಅದನ್ನು ಸರಿಪಡಿಸಿಕೊಳ್ಳಬಹುದು.
ಅಗಸ್ಟ್ 1 ರಿಂದ ತಿದ್ದುಪಡಿಗೆ ಅವಕಾಶ :
ಹೌದು ಸ್ನೇಹಿತರೆ, ರಾಜ್ಯ ಸರ್ಕಾರವು ರಾಜ್ಯದಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಗೆ ಕಾಯುತ್ತಿರುವಂತಹ ಕುಟುಂಬಗಳಿಗೆ ತಿದ್ದುಪಡಿ ಮಾಡಿಕೊಳ್ಳಲು ಆಗಸ್ಟ್ 1 ರಿಂದ ಅವಕಾಶವನ್ನು ಕಲ್ಪಿಸುವುದಾಗಿ ಅಧಿಕೃತವಾಗಿ ಮಾಹಿತಿ ನೀಡಿದೆ.
ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾವುದೇ ರೀತಿ ತಪ್ಪಾಗಿದ್ದರು ಅಥವಾ ನವ ಶಿಶುವಿನ ಹೆಸರನ್ನು ಸೇರ್ಪಡಿಸಬೇಕಾದರೆ ನೀವು ಅಗಸ್ಟ್ 15ನೇ ತಾರೀಖಿನ ಒಳಗಾಗಿ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬಹುದು.
ರೇಷನ್ ಕಾರ್ಡ್ e-KYC ಮಾಡಿಸಲು ಬೇಕಾಗುವ ದಾಖಲೆಗಳು :
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ವೋಟಿಂಗ್ ಕಾರ್ಡ್
- ಕುಟುಂಬದ ಎಲ್ಲ ಸದಸ್ಯರು ಇರಬೇಕು.
ರೇಷನ್ ಕಾರ್ಡ್ ತಿದ್ದುಪಡಿ ಹೇಗೆ ಮಾಡಿಸುವುದು ?
ಸ್ನೇಹಿತರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಏನಾದರೂ ತಿದ್ದುಪಡಿ ಆಗಬೇಕೆಂದರೆ ಅಥವಾ ತಪ್ಪಾಗಿದ್ದರೆ ನೀವು ಕೆಳಗೆ ನೀಡಿರುವ ಸರ್ಕಾರದ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ನಿಮ್ಮ ಮೊಬೈಲ್ ಮುಖಾಂತರವೇ ನಿಮ್ಮ ರೇಷನ್ ಕಾರ್ಡ್ ನಲ್ಲಿ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬಹುದು ಅಥವಾ ತಿದ್ದುಪಡಿ ಮಾಡಿಕೊಳ್ಳಬಹುದು.
ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್!
ಇದನ್ನು ಓದಿ : Google Pay Personal Loan : ಗೂಗಲ್ ಪೇ ಮೂಲಕ ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಿ !
ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ಇದರ ಮೇಲೆ ಕ್ಲಿಕ್ ಮಾಡಿ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ನೀವು ನೇರವಾಗಿ ನಿಮ್ಮ ಮೊಬೈಲ್ ಮೂಲಕವೇ ಮಾಡಿಕೊಳ್ಳಬಹುದು ಅಥವಾ ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ಅಥವಾ ಕರ್ನಾಟಕ ಒನ್ , ಗ್ರಾಮ ಒನ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಕೊಳ್ಳಬಹುದು.
ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರವು ಕೊನೆಯ ದಿನಾಂಕವನ್ನು ಆಗಸ್ಟ್ 15ರಂದು ನಿಗದಿಪಡಿಸಿದೆ.